Monday, November 8, 2010

ಅಕ್ಕಿ ಉಂಡೆ

                               ಅಕ್ಕಿ  ಉಂಡೆ
ಸಾಮಗ್ರಿಗಳು :1 ದೊಡ್ಡ ಕಪ್  ಅಕ್ಕಿ ರವೆ,(ಹಿಂದಿನ ದಿನವೇ ಅಕ್ಕಿ ತೊಳೆದು ಸ್ವಲ್ಪ ವನಗಿಸಿ ಮಿಕ್ಷಿಯಲ್ಲಿ ದೊಡ್ಡ  ರವೆ ಮಾಡಿಕೊಳ್ಳಿ ) ೧ ಕಪ್  ಕಾಯಿ ತುರಿ, ಉಪ್ಪು ,
ವಿಧಾನ :ಮೊದಲು ೧ ೧/೨ ಕಪ್ ನೀರನ್ನು ಕುದಿಸಬೇಕು .ಕುದಿಯುತಿದ್ದಂತೆ ಅದಕ್ಕೆ ಅಕ್ಕಿ ರವೆ ಸ್ವಲ್ಪ ಸ್ವಲ್ಪ ಹಾಕುತ್ತ ಇರಿ ಅದಕ್ಕೆ ಕಾಯಿ ತುರಿ ಹಾಕಿ ಕೈ  ಯ್ಯಡಿಸುತ್ತಾ  ಇರಿ (ಕೈ  ಬಿಟ್ಟರೆ ಸೀದು ಹೋಗುತ್ತದೆ ).ಮಿಶ್ರಣ ಗಟ್ಟಿ ಯಾದಂತೆ ಕೈ ಗೆ ನಿರು ತಾಗಿಸಿ ನೋಡಿ .ಅದು ಕೈ ಗೆ ತಾಗ ಬಾರದು .ಅದ್ದನ್ನು ತಣಿಸಿ ದೊಡ್ಡ ದೊಡ್ಡ ಉಂಡೆ ಕಟ್ಟಿ cooker ಅಲ್ಲಿ ಬೇಯಿಸಿ .3 ಸಿಟಿ ಹಾಕಿಸಿ .ತಿನ್ನಲು ರೆಡಿ .ಇದು  ವಣ  ಮೆಣಸಿನ chatney ಜೊತೆ ಬಲು ಟೇಸ್ಟ್.

ಸವತೆಕಾಯಿ ಕಾಯಿರಸ

ಸವತೆಕಾಯಿ  ಕಾಯಿರಸ                  
ಸಾಮಾಗ್ರಿಗಳು :1 ಸವತೆಕಾಯಿ ಸಿಪ್ಪೆ ಮತ್ತು ಬೀಜ ತೆಗಿದಿದ್ದು ,೨ ಸ್ಪೂನ್ ಸಾಸಿವೆ,೧/೪ ಸ್ಪೂನ್ ಮೆಂತೆ ,೨ ಸ್ಪೂನ್  ಉದ್ದಿನ ಬೇಳೆ , ಚಿಟಿಗೆ ಇಂಗು ,೧/೨ ಸ್ಪೂನ್ ಅರಿಸಿನ ಪುಡಿ,೪ ವಣ ಮೆಣಸು.ಬೆಲ್ಲ ,ಉಪ್ಪು .ಕಾಯಿ ತುರಿ .
 ವಿಧಾನ: ಮೊದಲು ಸವತೆ ಕಾಯಿಯನ್ನು ಸಣ್ಣಗೆ ಹೆಚ್ಚಿ  ಅದಕ್ಕೆ ಉಪ್ಪು ಬೆಲ್ಲ ಸೇರಿಸಿ ನೆನೆಸಿಡಬೇಕು .  ಮಸಾಲೆಗೆ  ಸಾಸಿವೆ, ಮೆಂತೆ ಇಂಗು ಮೆಣಸು ,ಉದ್ದಿನ ಬೇಳೆ,ಅರಿಸಿನ ಪುಡಿ (ಎಲ್ಲ ಹಸಿದು ,ಮಸಾಲೆಗೆ ಹುರಿಯಬಾರದು )ಇದ್ದನ್ನು ರುಬ್ಬಿ ನೆನೆದ ಸವತೆ ಕಾಯಿಗೆ ಸೇರಿಸಿ ರುಚಿ ರುಚಿ ಕಾಯಿರಸ ಸಿದ್ದ .
                                                       ಕರಿಬೇವಿನ ಸೊಪ್ಪಿನ ಸಾರು
ಸಾಮಾಗ್ರಿಗಳು ; 2 ಕಪ್   ಕರಿಬೇವಿನ ಸೊಪ್ಪು ,1 ಸ್ಪೂನ್ ಜೀರಿಗೆ, 1 1/2  ಸ್ಪೂನ್  ಕೊತ್ತಂಬರಿ ,   2 ಕಾಲ್ ಮೆಣಸು ,ಅರಿಸಿನ ಪುಡಿ ,ಹುಣಸೆ ಹಣ್ಣಿನ ರಸ, ೧ ಸ್ಪೂನ್ ಬೆಲ್ಲ,ಚಿಟಿಕೆ ಇಂಗು .

ವಿಧಾನ;ಈ ಮೇಲಿನ ಎಲ್ಲ ಮಿಶ್ರಣ ವನ್ನು mixiyalli ಅರೆದು ಪಾತ್ರೆ ಯಲ್ಲಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸ ಬೇಕು .ನಂತರ ಕುದಿಸಿದ ನೀರನ್ನು
ಸೋಸಿದರೆ ಬಿಸಿ ಬಿಸಿ ಸಾರು ರೆಡಿ.


ಥ್ಯಾಂಕ್ಸ್

Sunday, November 7, 2010

ಜೀರಿಗೆ ತಂಬಳಿ

ಜೀರಿಗೆ ತಂಬಳಿ ...
ಬೇಕಾಗುವ ಸಾಮಾಗ್ರಿ  ಗಳು  :ತೆಂಗಿನ ಕಾಯಿ ತುರಿ, ಜೀರಿಗೆ ,ತುಪ್ಪ ,ಉಪ್ಪು  ರುಚಿಗೆ ,
ವಿಧಾನ : ಮೊದಲು  ಜೀರಿಗೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ . ನಂತರ ತುರಿದ ತೆಂಗಿನ ಕಾಯಿಗೆ ಹುರಿದ ಜೀರಿಗೆಯನ್ನು ಹಾಕಿ ರುಬ್ಬಿ .ಅದಕ್ಕೆ ಕಡಿದ ಮಜ್ಜಿಗೆ ಸೇರಿಸಿ .ಕೊನೆಯದಾಗಿ ಸಾಸಿವೆ ,  ಒಣ ಮೆಣಸು ,ಕರ್ಬೇವ್ವಿನ ಸೊಪ್ಪು ಹಾಕಿ ವಗ್ಗರಣೆ ಕೊಡಿ .ರುಚಿಗೆ ತಕ್ಕಷ್ಟು ಉಪ್ಪು ಸೇರ್ಸಿ ಬಡಿಸಿ....

ಥ್ಯಾಂಕ್ಸ್..

ಸುಸ್ವಾಗತ.. ಹವ್ಯಕ ಅಡುಗೆಗೆ..

ನಮಸ್ಕಾರ,
ತಮಗೆಲ್ಲ ಹವ್ಯಕ ಅಡುಗೆಗೆ ಆದರದ ಸುಸ್ವಾಗತ. ಹವ್ಯಕ ಅಡುಗೆಯ ರುಚಿ ಕುಳಿತು ಉಂಡರೆ ಮರೆವುದು ವೇಳೆಯ ಮಿತಿ...

ಶಿಲ್ಪಾ ಗಜಾನನ...